KA-SEC-5-17_ಚಟುವಟಿಕೆ 2 _ನಿಮ್ಮ_ಆಲೋಚನೆಗಳನ್ನು_ಹಂಚಿಕೊಳ್ಳಿ

 

ಚಟುವಟಿಕೆ 2: ಗೆಳೆಯರ ಪಾತ್ರ - ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

ನಿಮ್ಮ ಹದಿಹರೆಯದ ವರ್ಷಗಳಲ್ಲಿ ನಿಮ್ಮ ಸ್ನೇಹಿತರು ಅಪೇಕ್ಷಿಸಿದ ವಿಷಯಗಳನ್ನು ಮಾಡಿದ, ಹಣವನ್ನು ಕದಿಯುವ, ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ಅಥವಾ ಧೂಮಪಾನ ಮಾಡುವ ಪರಿಸ್ಥಿತಿಯಲ್ಲಿ ನೀವು ಪ್ರಯತ್ನಿಸಿದ ಹಾಗೂ ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಯೋಚಿಸಿ.

ನಿಮ್ಮ ಆಲೋಚನೆಗಳು ಭಾವನೆಗಳು ಮತ್ತು ತಂತ್ರಗಳು ಯಾವುವು? ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ.

KA-SEC-5-18_ಚಟುವಟಿಕೆ 6_ನಿಮ್ಮ_ಪ್ರತಿಕ್ರಿಯೆಯನ್ನು_ಹಂಚಿಕೊಳ್ಳಿ

 

ನಿಮ್ಮ ಮಗ/ಮಗಳು ನಿಮಗಿಷ್ಟವಿಲ್ಲದ ಕೆಲಸವನ್ನು ಮಾಡಿದ್ದಾರೆಂದು ಕಲ್ಪಿಸಿಕೊಳ್ಳಿ. ನಿಮಗೆ ತುಂಬಾ ಕೆಟ್ಟದಾದ ಅಥವಾ ನೋವಿನ ಅನುಭವವಾಗುತ್ತದೆ. ಈ ಪರಿಸ್ಥಿತಿಯನ್ನು ಈ ಕೆಳಗಿನ ಅಂಶಗಳಲ್ಲಿ ವಿಶ್ಲೇಷಿಸಿ :

  •   ಅವರು ಏನು ಮಾಡಿದ್ದಾರೆ?
  • ಅವರು ಏಕೆ ಹೀಗೆ ಮಾಡಿದ್ದಾರೆ/ಹೇಳಿದ್ದಾರೆ?
  • ನೀವು ಅದಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ? ಈ ಪರಿಸ್ಥಿತಿಯಲ್ಲಿ ನೀವು ಹೇಗೆ ವಿಭಿನ್ನವಾಗಿ ವರ್ತಿಸಬಹುದಿತ್ತು? ನಿಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳಿ.

KA-SEC-6-20-ನಿಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಿ

 ಒಂಬತ್ತು ವರ್ಷದಿಂದ ಇಲ್ಲಿಯವರೆಗೆ ನಿಮ್ಮಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಪಟ್ಟಿ ಮಾಡಿ. ನೀವು ಅನುಭವಿಸಿದ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳನ್ನು ವಿವರಿಸಿ. ಈ ಬದಲಾವಣೆಗಳು ಸಾಮಾನ್ಯ ಮತ್ತು ಸಹಜ ಎಂದು ನೀವು ಅರಿತುಕೊಳ್ಳುವವರೆಗೂ ನಿಮಗೆ ಆಶ್ಚರ್ಯ ಅಥವಾ ಒತ್ತಡವನ್ನುಂಟು ಮಾಡಿದ ಬದಲಾವಣೆಗಳು ಯಾವುವು?

kA-SEC-6-7-ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ

 ದೈಹಿಕ ಸಾಮರ್ಥ್ಯದ ಚಟುಚಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಒಟ್ಟಾರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ.

KA_SEC_12_9_ಚಟುವಟಿಕೆ 1 : ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ

  ಆಟಿಕೆಗಳನ್ನು ಬಳಸುವುದರಿಂದ ನಿಮ್ಮ ತರಗತಿ ಪ್ರಕ್ರಿಯೆಯನ್ನು ಹೇಗೆ ಸಂತಸದಾಯಕಗೊಳಿಸುವಿರಿ? ನಿಮ್ಮ ಯೋಚನೆಯನ್ನು ಹಂಚಿಕೊಳ್ಳಿರಿ.